ಪಂಚಮೂರ್ತಿಯನೊಳಕೊಂಡಿರ್ದ ಪ್ರಸಾದಮೂರ್ತಿಯ
ಪಂಚವಿಧವ ಗರ್ಭೀಕರಿಸಿಕೊಂಡಿರ್ಪ ಬಯಲಾಂಗನು
ತನ್ನಂತರಂಗದ ಅವಿರಳಬೆಳಗೆಂದರಿದು
ಮನ ಭಾವ ಕರಣದೊಳಾವರಿಸಿ ನೆರೆದು ನಿತ್ಯ
ಪರಮಪರಿಣಾಮಿಯಾಗಿರ್ದ
ಗುರುನಿರಂಜನ ಚನ್ನಬಸವಲಿಂಗ ತಾನಾಗಿ.
Art
Manuscript
Music
Courtesy:
Transliteration
Pan̄camūrtiyanoḷakoṇḍirda prasādamūrtiya
pan̄cavidhava garbhīkarisikoṇḍirpa bayalāṅganu
tannantaraṅgada aviraḷabeḷagendaridu
mana bhāva karaṇadoḷāvarisi neredu nitya
paramapariṇāmiyāgirda
guruniran̄jana cannabasavaliṅga tānāgi.
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ