ಕತ್ತೆಯ ತಾಯಿ ಕುದುರೆಯ ಹಡೆದು
ಶೃಂಗಾರದಲ್ಲಿ ಬೆಳೆದು ಭೂಮಿಯೊಳುದಯಿಸಿದ
ಹುಲ್ಲ ಮೇಯುತ್ತ
ಏಳುಕೆರೆಯೊಳಗೆ ನಿಂದು, ಐದುಬಾವಿಯ ನೀರುಕುಡಿದು
ಕೆಳಮುಖದ ಮನೆಗಳಲ್ಲಿ ತಾಯಿ
ಮಗನ ಹೊತ್ತು ತಿರುಗುತ್ತಿದ್ದಿತಯ್ಯಾ.
ಮನೆಯೊಳಗಣ ಬೆಂಕಿ ಕೆದರಿ ಮುಂದೆ ಬರಲುಳ್ಳ
ಬೆಂದ ಹೊಯಿಲಿಗಳು ಉರಿಯಲು
ಕುದುರೆಯ ತಾಯಿ ಸಾಯಲು ಕತ್ತೆ ಉಳಿದು ನಿತ್ಯವಾದಲ್ಲಿ
ಗುರುನಿರಂಜನ ಚನ್ನಬಸವಲಿಂಗ ತಾನೇ ಬೇರಿಲ್ಲ.