Index   ವಚನ - 770    Search  
 
ಕರಸ್ಥಲದಲಿಂಗದೊಳು ಮನವ ಮುಳುಗಿಸಲರಿಯದೆ, ಮಲತ್ರಯದ ಬೊಂಪಾಸದಲ್ಲಿ ಮುಳುಗಿ ಏಳಲಾರದೆ ಹೊರಳಾಡುವ ದುರ್ಗತಿಗಳಿಗಿನ್ನಾವ ಸ್ಥಲಸಂಬಂಧವಪ್ಪದು ಹೇಳಾ! ಈ ಧರ್ಮಿಕರ್ಮಗಳನೆನ್ನತ್ತ ತೋರದಿರಾ ಗುರುನಿರಂಜನ ಚನ್ನಬಸವಲಿಂಗಾ.