ಸೃಷ್ಟಿ ಸ್ಥಿತಿ ಸಂಹಾರ ತಿರೋಧಾನ ಅನುಗ್ರಹವೆಂಬ
ಪಂಚಕೃತ್ಯಂಗಳ ಪರಿಮಿತವನರಿಯದ
ಪಂಚಾಚಾರಸ್ವರೂಪವ ಸರ್ವಾಂಗ ವೇಧಿಸಿಕೊಂಡು
ಮೀರಿದ ಗತಿಯೊಳೊಪ್ಪಿ ಕಾರ್ಯಕಾರಣ ತಾನಾಗಿ,
ತನ್ನ ತಾನರಿಯದಪ್ರತಿಮ ಶರಣ
ಗುರುನಿರಂಜನ ಚನ್ನಬಸವಲಿಂಗವಾಗಿರ್ದ
ನಿಲವ ನೋಡಾ.
Art
Manuscript
Music
Courtesy:
Transliteration
Sr̥ṣṭi sthiti sanhāra tirōdhāna anugrahavemba
pan̄cakr̥tyaṅgaḷa parimitavanariyada
pan̄cācārasvarūpava sarvāṅga vēdhisikoṇḍu
mīrida gatiyoḷoppi kāryakāraṇa tānāgi,
tanna tānariyadapratima śaraṇa
guruniran̄jana cannabasavaliṅgavāgirda
nilava nōḍā.