ಲಿಂಗವಾದ ಶರಣನಂಗದಲ್ಲಿ ದುಸ್ಸಂಗ
ದುರ್ಗುಣ ದುಶ್ಚೇಷ್ಟೆಗಳುಂಟೆ?
ಕುಟಿಲ ಕುಯುಕ್ತಿ ಹಟಕರ್ಮ ಹರಕಮಾತುಗಳುಂಟೆ?
ಹೆಣ್ಣುಭೂತ ಮಣ್ಣುಭೂತ
ಹೊನ್ನು ಭೂತದಾಹುತಿಯಾಗಿ ಹೋಗಲುಂಟೆ?
ಸತ್ತು ಬಂದು ಸುತ್ತಿಮುಳುಗುವ ನಿತ್ಯಲಿಂಗೈಕ್ಯನ ಘನವನು
ಗುರುನಿರಂಜನ ಚನ್ನಬಸವಲಿಂಗದಲ್ಲಿಯೇ ಕಾಣಲಾಯಿತ್ತು.
Art
Manuscript
Music
Courtesy:
Transliteration
Liṅgavāda śaraṇanaṅgadalli dus'saṅga
durguṇa duścēṣṭegaḷuṇṭe?
Kuṭila kuyukti haṭakarma harakamātugaḷuṇṭe?
Heṇṇubhūta maṇṇubhūta
honnu bhūtadāhutiyāgi hōgaluṇṭe?
Sattu bandu suttimuḷuguva nityaliṅgaikyana ghanavanu
guruniran̄jana cannabasavaliṅgadalliyē kāṇalāyittu.