Index   ವಚನ - 808    Search  
 
ಗುರುವ ಕಂಡು ಶರಣೆಂದವರು, ಲಿಂಗವ ಕಂಡು ಶರಣೆಂದವರು, ಜಂಗಮವ ಕಂಡು ಶರಣೆಂದವರು ಸ್ವಯವನರಿಯರು. ಗುರುವ ಕಂಡು ಶರಣೆನ್ನದವರು, ಲಿಂಗವ ಕಂಡು ಶರಣೆನ್ನದವರು, ಜಂಗಮವ ಕಂಡು ಶರಣೆನ್ನದವರು ಮರೆವಿನ ಸುಖಪರಿಣಾಮ ತಲೆಗೇರಿ ತಲ್ಲೀಯವಾದರು ಗುರುನಿರಂಜನ ಚನ್ನಬಸವಲಿಂಗದೊಳಗೆ.