Index   ವಚನ - 825    Search  
 
ಏನೂ ಇಲ್ಲದ ಠಾವಿನಲ್ಲಿ ನಿಂದು ಭೂಮಿಯ ನೋಡಲು ಶ್ರದ್ಧೆಯ ಕಳೆ ಕಾಣಬಂದಿತ್ತು. ನಿಂದು ಜಲವ ನೋಡಲು ನೈಷ್ಠೆಯ ಕಳೆ ಕಾಣಬಂದಿತ್ತು. ಬೆಂಕಿಯ ನೋಡಲು ಸಾವಧಾನಕಳೆ ಕಾಣಬಂದಿತ್ತು, ಗಾಳಿಯ ನೋಡಲು ಅನುಭಾವಕಳೆ ಕಾಣಬಂದಿತ್ತು ಆಕಾಶವ ನೋಡಲು ಆನಂದಕಳೆ ಕಾಣಬಂದಿತ್ತು ಆತ್ಮನ ನೋಡಲು ಸಮರಸದಕಳೆ ಕಾಣಬಂದಿತ್ತು. ಇದು ಕಾರಣ ತನ್ನ ತಾ ನೋಡಲು ಗುರುನಿರಂಜನ ಚನ್ನಬಸವಲಿಂಗವಾಗಿ ಕಣ್ಣುಗೆಟ್ಟು ನಿಜಲಿಂಗೈಕ್ಯವಾಯಿತ್ತು.