Index   ವಚನ - 830    Search  
 
ಗುರುವ ಕಂಡಾತ ಶಿಷ್ಯನಲ್ಲ, ಲಿಂಗವ ಕಂಡಾತ ಭಕ್ತನಲ್ಲ, ಜಂಗಮವ ಕಂಡಾತ ಶರಣನಲ್ಲ. ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ನಿಜೈಕ್ಯಂಗೆ ಕಾಣಲಿಲ್ಲ ಕಟ್ಟಲಿಲ್ಲ ಮಾಡಲಿಲ್ಲ [ಮಟ್ಟ]ಲಿಲ್ಲ.