ಸುಚಿತ್ತವನೊಳಕೊಂಡ ಲಿಂಗದ ಕಳೆಯ ನೋಡಾ,
ಸುಬುದ್ಧಿಯನೊಳಕೊಂಡ ಲಿಂಗದ ಕಳೆಯ ನೋಡಾ,
ನಿರಹಂಕಾರವನೊಳಕೊಂಡ ಲಿಂಗದ ಕಳೆಯ ನೋಡಾ,
ಸುಮನವನೊಳಕೊಂಡ ಲಿಂಗದ ಕಳೆಯ ನೋಡಾ,
ಸುಜ್ಞಾನವನೊಳಕೊಂಡ ಲಿಂಗದ ಕಳೆಯ ನೋಡಾ,
ಸದ್ಭಾವವನೊಳಕೊಂಡ ಲಿಂಗದ ಕಳೆಯ ನೋಡಾ,
ಇದು ಕಾರಣ ಎನ್ನ ಸರ್ವಾಂಗವನೊಳಕೊಂಡು
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಕಳೆಯ ನೋಡಾ.
Art
Manuscript
Music
Courtesy:
Transliteration
Sucittavanoḷakoṇḍa liṅgada kaḷeya nōḍā,
subud'dhiyanoḷakoṇḍa liṅgada kaḷeya nōḍā,
nirahaṅkāravanoḷakoṇḍa liṅgada kaḷeya nōḍā,
sumanavanoḷakoṇḍa liṅgada kaḷeya nōḍā,
sujñānavanoḷakoṇḍa liṅgada kaḷeya nōḍā,
sadbhāvavanoḷakoṇḍa liṅgada kaḷeya nōḍā,
idu kāraṇa enna sarvāṅgavanoḷakoṇḍu
guruniran̄jana cannabasavaliṅgā
nim'ma kaḷeya nōḍā.