Index   ವಚನ - 834    Search  
 
ಅಳಿಯನಂತೆ ಬಂದಪ್ಪನ ಕೈಯಿಂದ ತಲೆಗೆ, ಗೆಳೆಯನಂತೆ ಬಂದಪ್ಪನ ಮಾತಿನಿಂದೆ ಕಿವಿಗೆ, ಗಂಡನಂತೆ ಬಂದ ಅಪ್ಪ ಮನೆಯಿಂದ ಕೈಹಿಡಿಯ, ಇನ್ನೇನು ಮುಟ್ಟಲವ್ವಾ, ಇನ್ನೇನು ಕೇಳಲವ್ವಾ, ಇನ್ನೇನು ಹಿಡಿಯಲವ್ವಾ. ಮುಟ್ಟುವರೆ ಭಾವವಿಲ್ಲ, ಕೇಳುವರೆ ಮನವಿಲ್ಲ, ಹಿಡಿವರೆ ಕೈಯಿಲ್ಲ. ತಂದೆಯ ಮಗನ ಸಂಗದಿಂದೆ ಸಂಸಾರವ ಮಾಡಿ ಗಂಡನಕೊಂದು ಸತ್ತುದು ನಮ್ಮ ಗುರುನಿರಂಜನ ಚನ್ನಬಸವಲಿಂಗಕ್ಕೆ ಸುಖವಾಯಿತ್ತು.