Index   ವಚನ - 836    Search  
 
ಗುರುವಿಲ್ಲದ ಶಿಷ್ಯ ಕರವಿಲ್ಲದ ಲಿಂಗವಹಿಡಿದು ಕಂಗಳಿಲ್ಲದೆ ನೋಡಿ ಕರುಳಿಲ್ಲದೆ ಪೂಜಿಸಿ, ಭಾವವಿಲ್ಲದೆ ಬೆರೆಸಿದ ಬಳಿಕ ಮಾಡಬಾರದ ಮಾಟ ನೋಡಬಾರದ ನೋಟ ಕೂಡಬಾರದ ಕೂಟ ನಿಮ್ಮೊಳಗಾಯಿತ್ತು, ಗುರುನಿರಂಜನ ಚನ್ನಬಸವಲಿಂಗಾ.