Index   ವಚನ - 841    Search  
 
ಕ್ರಿಯಾ ಗುರುವಿನಿಂದೊದಗಿ ಬಂದ ಮಹಾಂತಪದದಿಂದೆ ಎನ್ನಂಗವ ಕಂಡೆ ಲಿಂಗದೊಳಗೆ. ಜ್ಞಾನಗುರುವಿನಿಂದೊದಗಿ ಬಂದ ಮಹಾಂತಪದದಿಂದೆ ಎನ್ನ ಪ್ರಾಣವಕಂಡೆ ಲಿಂಗದೊಳಗೆ. ಮಹಾಜ್ಞಾನ ಗುರುವಿನಿಂದೊದಗಿ ಬಂದ ಮಹಾಂತಪದದಿಂದೆ ಎನ್ನಾತ್ಮವಕಂಡೆ ಲಿಂಗದೊಳಗೆ. ಅಂಗ ಪ್ರಾಣಾತ್ಮಲಿಂಗದೊಳಗಡಗಿ ತಾನಿಲ್ಲದ ಬಳಿಕ ಪಾದೋದಕವನಾಹ್ವಾನಿಸಿ ವಿಸರ್ಜಿಸುವ ಭಾವ ತರಹರವಾಗಿ ಮರೆಯಿತ್ತು ಗುರುನಿರಂಜನ ಚನ್ನಬಸವಲಿಂಗದೊಳಗೆ.