Index   ವಚನ - 850    Search  
 
ತನು ಕ್ರಿಯೆಯಲ್ಲಿ, ಮನ ಜ್ಞಾನದಲ್ಲಿ, ಪ್ರಾಣ ಘನದಲ್ಲಿ, ಭಾವ ಮಹದಲ್ಲಿ ತರಹರವಾಗಿ, ತನ್ನ ತಾನರಿದಿರ್ದ ಶರಣನ ಸಮರಸಕ್ಕೆ ಮೆಚ್ಚಿ ಬಿದ್ದೆನು ಗುರುನಿರಂಜನ ಚನ್ನಬಸವಲಿಂಗದೊಳಗೆ.