ಬಸವಣ್ಣನ ರೂಪವ ನಾನು ಕಾಣಲಿಲ್ಲ,
ಮಡಿವಾಳಯ್ಯನ ರೂಪವ ನಾನು ಕಾಣಲಿಲ್ಲ,
ಮರುಳಶಂಕರದೇವರ ರೂಪವ ನಾನು ಕಾಣಲಿಲ್ಲ,
ಸಿದ್ಧರಾಮಯ್ಯನ ರೂಪವ ನಾನು ಕಾಣಲಿಲ್ಲ,
ಪ್ರಭುವಿನ ರೂಪವ ನಾನು ಕಾಣಲಿಲ್ಲ,
ಘಟ್ಟಿವಾಳಯ್ಯನ ರೂಪವ ನಾನು ಕಾಣಲಿಲ್ಲ.
ಕಂಡು ಮಹಾದೇವಿಯಕ್ಕನ ಪದಕಮಲಕ್ಕೆ
ಮರುಳುಗೊಂಡ ಮರಿದುಂಬಿಯಯ್ಯಾ
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.