Index   ವಚನ - 877    Search  
 
ಅದ್ವೈತನಾಗಿ ಜೀವಭಾವಿಯಲ್ಲ ಶರಣ. ದ್ವೈತಿಯಾಗಿ ದೇಹಭಾವಿಯಲ್ಲ ಶರಣ. ಯೋಗಗತಿಯೆಂದು ಕಷ್ಟಕರ್ಮಿಯಲ್ಲ ಶರಣ. ಮತ್ತೆಂತೆಂದೊಡೆ, ಸತ್ಕ್ರಿಯಾನಂದಸುಖಿ ಶರಣ. ಸಮಕ್‍ಜ್ಞಾನಾನಂದಸುಖಿ ಶರಣ. ಗುರುನಿರಂಜನ ಚನ್ನಬಸವಲಿಂಗಾ ಸಮರಸಾನಂದಸುಖಿ ಶರಣ.