Index   ವಚನ - 882    Search  
 
ಅಯ್ಯಾ, ನಿಮ್ಮಂಗ ನಾನಾಗಿ ನಿನ್ನಿಂದೆ ಕಡೆಗಿಟ್ಟು ಮಾಯೆಯ ಕಾವಲವ ಹೊಗಲೆನಗೆ ವಿಧಿಯೆ? ಅವಳ ಕಲ್ಪನೆಯೊಳೊಂದಿ ನಡೆಯಲೆನಗೆ ಅಭಾಗ್ಯವೆ ಹೇಳಾ! ಅವಳ ಸಂಸಾರಸುಖವನರಿಯಲೆನಗೆ ದುರ್ಮರುಳವೆ ನೋಡಾ. ಗುರುನಿರಂಜನ ಚನ್ನಬಸವಲಿಂಗಾ ನೀವಿರ್ದಂತೆ ನಾನಿಪ್ಪೆ ನಿಮ್ಮೊಳಗೆನ್ನ ಮರೆದು.