Index   ವಚನ - 899    Search  
 
ಆಚಾರಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು. ಗುರುಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು. ಶಿವಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು. ಜಂಗಮಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು. ಇಂತು ಷಡುಲಿಂಗಾನುಭಾವದಲ್ಲಿ ಅನಿಮಿಷನಾಗಿ ಅಖಂಡ ಗುರುನಿರಂಜನ ಚನ್ನಬಸವಲಿಂಗೈಕ್ಯ ಪದಪ್ರಕಾಶದೊಳ್ಮುಳುಗಿ ಬೆಳಗುತಿರ್ದೆನು.