Index   ವಚನ - 905    Search  
 
ಅಯ್ಯಾ, ಎನ್ನ ಭಕ್ತಿಪ್ರಕಾಶ ನಿಮ್ಮನಾವರಿಸಿರ್ದು ಮರಳಿಮಾಡುವ ಕುರುಹಿಂಗೆ ಇಂಬುಗಾಣೆನಯ್ಯಾ. ಎನ್ನ ಯುಕ್ತಿಪ್ರಕಾಶ ನಿಮ್ಮನಾವರಿಸಿರ್ದು ಮರಳಿ ಯುಕ್ತಿಯ ಕುರುಹಿಂಗೆ ಇಂಬುಗಾಣೆನಯ್ಯಾ. ಅಯ್ಯಾ, ಎನ್ನ ಜ್ಞಾನತ್ರಿಪುಟಿಗಳ ಪ್ರಕಾಶ ನಿಮ್ಮನಾವರಿಸಿರ್ದು ಮರಳಿ ಜ್ಞಾತೃ, ಜ್ಞಾನ, ಜ್ಞೇಯವೆಂಬ ಕುರುಹಿಂಗೆ ಇಂಬುಗಾಣೆನಯ್ಯಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಲಿಂಗೈಕ್ಯದಾನಂದ ಬೆಳಗನೇನೆಂದುಪಮಿಸಬಹುದು?