Index   ವಚನ - 913    Search  
 
ಬಯಲಭೂಮಿಯ ಕಲಾಪರ್ಯಾಯನಾರಿಯ ಸಂಗದ ಸುಖವೆನ್ನ ಸುಬುದ್ಧಿಯೊಳಗಾಯಿತ್ತು. ಬಯಲ ಅಪ್ಪುವಿನ ಕಲಾಪರ್ಯಾಯಸುಗುಣಿಯ ಸಂಗದ ಸುಖವೆನ್ನ ನಿರಹಂಕಾರದೊಳಗಾಯಿತ್ತು, ಬಯಲಾನಲ ಕಲಾಪರ್ಯಾಯಕಾಮಿನಿಯ ಸಂಗದ ಸುಖವೆನ್ನ ಸುಮನದೊಳಗಾಯಿತ್ತು. ಬಯಲಾನಿಲ ಕಲಾಪರ್ಯಾಯಕೂಟ ಸ್ತ್ರೀಸಂಗದ ಸುಖವೆನ್ನ ಸುಜ್ಞಾನದೊಳಗಾಯಿತ್ತು. ಬಯಲಾಂಬರ ಕಲಾಪರ್ಯಾಯ ಪರಲಲನೆಯ ಸಂಗದ ಸುಖವೆನ್ನ ಸದ್ಭಾವದೊಳಗಾಯಿತ್ತು. ಬಯಲಾತ್ಮ ಕಲಾಪರ್ಯಾಯ ಚಿತ್ರಾಂಗನೆಯ ಸಂಗದ ಸುಖವೆನ್ನ ಅನುಪಮಪ್ರಕಾಶ ಗುರುನಿರಂಜನ ಚನ್ನಬಸವಲಿಂಗದೊಳಗಾಯಿತ್ತು.