Index   ವಚನ - 918    Search  
 
ಕ್ಷುತ್ತುವರತಲ್ಲಿ ಪ್ರಸಾದದ ಭಾವನಾಸ್ತಿ. ಪಿಪಾಸುವರತಲ್ಲಿ ಪಾದೋದಕದ ಭಾವನಾಸ್ತಿ. ಶೋಕವರತಲ್ಲಿ ತಪ ಮೌನ ಜಪ ನಾಸ್ತಿ. ಮೋಹವರತಲ್ಲಿ ಮಾಟಕೂಟದ ಬೇಟನಾಸ್ತಿ. ಜನನವರತಲ್ಲಿ ಶಿಷ್ಯತನನಾಸ್ತಿ. ಮರಣವರತಲ್ಲಿ ಗುರುನಿರಂಜನ ಚನ್ನಬಸವಲಿಂಗವಾಗಿ ಲಿಂಗೈಕ್ಯನಾಸ್ತಿ.