Index   ವಚನ - 921    Search  
 
ಕಣ್ಣು ನಾಸ್ತಿಯಾದಲ್ಲಿ ಕಾಯದ ರೂಪುನಾಸ್ತಿ. ಮನನಾಸ್ತಿಯಾದಲ್ಲಿ ನೋಟದ ಬಗೆನಾಸ್ತಿ. ಪ್ರಾಣನಾಸ್ತಿಯಾದಲ್ಲಿ ಸಂಚಲ ಮಾಟನಾಸ್ತಿ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಭಾವನಾಸ್ತಿಯಾದಲ್ಲಿ ಮಹಾಲಿಂಗೈಕ್ಯ ತಾನೆ ನೋಡಾ.