ಸಮರಸ ಪಾದೋದಕದಲ್ಲಿ ಲೀಯವಾದ ಶರಣಂಗೆ
ಭಿನ್ನವಿಟ್ಟರಿವ ಪಾದೋದಕದ ಕಟ್ಟಳೆ ಭಾವಿಸ,
ಕಾರ್ಯಕಾರಣ ನಷ್ಟವಾದುದಾಗಿ.
ದಶವಿಧಪಾದೋದಕವನರಿಯದಿರ್ದ ಪಾದೋದಕ ತಾನೆಯಾಗಿ,
ಗುರುನಿರಂಜನ ಚನ್ನಬಸವಲಿಂಗಕ್ಕಾವರಿಸಿ
ಅಡಗಿರ್ದನು.
Art
Manuscript
Music
Courtesy:
Transliteration
Samarasa pādōdakadalli līyavāda śaraṇaṅge
bhinnaviṭṭariva pādōdakada kaṭṭaḷe bhāvisa,
kāryakāraṇa naṣṭavādudāgi.
Daśavidhapādōdakavanariyadirda pādōdaka tāneyāgi,
guruniran̄jana cannabasavaliṅgakkāvarisi
aḍagirdanu.