Index   ವಚನ - 926    Search  
 
ಪರಿಪೂರ್ಣಮಯವಪ್ಪ ಪರಮಸುಜ್ಞಾನದಿಂದೆ ಪರುಷ ಲೋಹದ ತೆರನಾದೆ. ಕ್ರಿಯಾಘನ ಗುರುವಿನಿಂದೆ ಭ್ರಮರ ಕೀಟನ್ಯಾಯದಂತಾದೆ. ಘನಲಿಂಗಸಂಗದಿಂದೆ ಕ್ಷೀರ ನೀರಸಂಗದಂತಾದೆ. ಅಭಿನ್ನ ಗುರುನಿರಂಜನ ಚನ್ನಬಸವಲಿಂಗದಲ್ಲಡಗಿ ಅಳಿದು ಉರಿ ಕರ್ಪೂರ ಸಮರಸದಂತಾದೆ.