Index   ವಚನ - 927    Search  
 
ಮಾಟವನರಿಯೆ ಕಾಯವಿಲ್ಲವಾಗಿ, ನೋಟವನರಿಯೆ ಕಂಗಳಿಲ್ಲವಾಗಿ, ಕೂಟವನರಿಯೆ ಮನವಿಲ್ಲವಾಗಿ, ಮಾಟ ನೋಟವನೈಯ್ದಿ, ನೋಟ ಕೂಟವಕೂಡಿ, ಕೂಟ ಭಾವವನೈಯ್ದಿ, ಭಾವ ನಿರ್ಭಾವವನೈಯ್ದಿ ನಿರ್ವಯಲಾದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.