Index   ವಚನ - 953    Search  
 
ಆನೆಯ ವೇಷವತೊಟ್ಟು ಶ್ವಾನನಗತಿಯಲ್ಲಿ ಗಮನಿಸುವ ಗಾವಿಲಮಾನವರಿಗೆ ಅವಿರಳ ಭಕ್ತಿ ಅಳವಡುವುದೆ? ನಡೆಯೊಂದುಪರಿ ನುಡಿಯೊಂದುಪರಿ ಹಿರಿಯರಡಿಗೆ ಶರಣೆಂದು ನಡೆಯದೆ ಪರಯೋನಿಮುಖಜನಿತರಾದ ಪ್ರಾಣಿಗಳೆತ್ತ ಬಲ್ಲರಯ್ಯಾ ಅನಾದಿಯ ಸ್ಥಲಗತಿಯ ಗುರುನಿರಂಜನ ಚನ್ನಬಸವಲಿಂಗಾ.