Index   ವಚನ - 968    Search  
 
ಒಳಗಿನ ಮಾಟ ಸಿಕ್ಕಲರಿಯದಿರ್ದಡೆ ಹೊರಗೆ ಕಾಣಿಸುವ ತನು, ತನುವಿಡಿದ ಮನ, ಮನವಿಡಿದ ಭಾವ, ಈ ತ್ರಿವಿಧದಿಂದೆ ನಿರ್ವಂಚಕನಾಗಿ ಷಟ್ಕ್ರಿಯಾವ್ಯಾಪಾರವನೈಯ್ದಿ ಷಟ್‍ಸ್ಥಲಗತಿಮತಿಯಿಂದೆ ಗುರುಲಿಂಗಾಚಾರಭಕ್ತಿಯ ಮಾಡಿ ಸುಖಿಸಿ ಸುಖಮಯನಾದ ಸತ್ಯಭಕ್ತನೇ ಭಕ್ತನಲ್ಲದೆ ಉಳಿದವೆಲ್ಲ ಒಡಲುಪಾಧಿ. ಈ ನಿಲುವಿಗೆ ನಡೆಗಡಿದು ಬಂದನವಗಲದು ಬಯಲಗಾಣದು ತ್ರಿವಿಧ ವಾಕ್ಯದಲ್ಲರಿದು ನೋಡು ನೀನಾಗಬಲ್ಲರೆ ಗುರುನಿರಂಜನ ಚನ್ನಬಸವಲಿಂಗವು.