Index   ವಚನ - 986    Search  
 
ನವಭಕ್ತಿರಸವಕೊಂಡು ಶಿವಪ್ರಸಾದವನಿತ್ತ ಬಳಿಕ ಆ ಪ್ರಸಾದವನೊಂದೆರಡು ಮೂರಾರು ಮತ್ತೆ ಮುಖಮುಖವರಿದು ವೇಧಿಸಿದಲ್ಲಿ ಕಿರಿಕುಳವಲ್ಲುಂಟೆ? ಬರಿಕುಳವಿಲ್ಲುಂಟೆ? ಕುಳಂಗಳ ನಿಲಿಸಿ ಕೂರ್ಪರೊಳು ಬೆರೆದು ಕೂಡಬಾರದು. ಅದು ಕಾರಣ ಸೂತ್ರದ ಸುಳುಹು ಕಳಚಲಾಗದು ಕನಸಿನಲ್ಲಿ. ಕಾರಣಮೂರ್ತಿಯ ಕಲ್ಪಿತಕ್ಕೆ ಇದೇ ಕುರುಹು ಗುರುನಿರಂಜನ ಚನ್ನಬಸವಲಿಂಗದಲ್ಲಿ.