Index   ವಚನ - 987    Search  
 
ಇರ್ದ ಸಂಸಾರವನೊದ್ದುಕಳೆಯದೆ ಇಲ್ಲದ ಶುದ್ಧನ ಮಾಡಿದೆನೆಂಬ ನುಡಿ ಅಶುದ್ಧ ಕಾಣಾ. ಅದೆಂತೆಂದೊಡೆ, ಕಾಯಕ್ಕುಪದೇಶವ ಮಾಡಿದಡೆ ಆ ಕಾಯವು ಗುರುಲಿಂಗ ಚರಭಕ್ತಿ ಸಾಕಾರ ನಿರಾಕಾರಸನ್ನಿಹಿತ ನೋಡಾ. ಭಾವಕ್ಕುಪದೇಶವ ಮಾಡಿದಡೆ ಆ ಭಾವ ಚರಗುರು ಲಿಂಗಭಕ್ತಿ ಸಾಕಾರ ನಿರಾಕಾರಸನ್ನಿಹಿತ ನೋಡಾ. ಬೆಂಕಿಯಿಲ್ಲದೆ ಸದೆಯ ದಹಿಸಿದವರುಂಟೆ? ನಿನ್ನ ನಿಷ್ಠೆ ಆತನ ಸ್ಪಷ್ಟ, ನೀನು ನಿನ್ನಂತೆ ಆತ ತನ್ನಂತೆ. ನಮ್ಮ ಗುರುನಿರಂಜನ ಚನ್ನಬಸವಲಿಂಗ ಸಹಜನಂತೆ.