ಒಂದು ವಿಷಯಕೆ ಮನೆಯ ನೋಡಿ ಮಾಡುವರು
ತನುಗುಣವ ತಪ್ಪಿಸಿ ತರಲರಿಯದವರು.
ಒಂದು ವಿಷಯಕೆ ಧನವ ನೋಡಿ ಮಾಡುವರು
ಪ್ರಾಣನಗುಣವ ತಪ್ಪಿಸಿ ತರಲರಿಯದವರು.
ಒಂದು ವಿಷಯಕೆ ನೆರವಿಯ ನೋಡಿ ಮಾಡುವರು
ಭಾವದಗುಂಜ ತಪ್ಪಿಸಿ ತರಲರಿಯದವರು.
ಈ ಸಂಬೋಧೆಯ ಆಸೆಗಿಕ್ಕಿ ಹೇಸದೆ
ಘಾಸಿಯಾಗುವ ಪ್ರಾಣಿಗಳು
ತಮಗೆ ಗುರುತ್ವ ಸಹಜವೆ ಅಲ್ಲ.
ಮತ್ತೆಂತೆಂದೊಡೆ : ಭೂಷಣವಿಲ್ಲದ
ಶಿಷ್ಯಂಗೆ ಗುಣವಿಲ್ಲದ ಗುರುವು
ಅಣಕದನುಗ್ರಹ ಎಣಿಕೆಗೆಬಾರದು
ನಮ್ಮ ಗುರುನಿರಂಜನ ಚನ್ನಬಸವಲಿಂಗದ
ಶರಣಚಾರಿತ್ರದೊಳಗೆ.