Index   ವಚನ - 1000    Search  
 
ಅರಣ್ಯದೊಳಗಾದ ತಾವರೆಯಗಡ್ಡೆಯ ನೋಡಿ ನೀರ ಹೊಯ್ಯಿರೊ ಚಿಕ್ಕಮಕ್ಕಳತಂದೆಗಳೆನಿಸುವರು. ಎತ್ತಿದ ಕುಸುಮಗಳತ್ತ ಒಯ್ಯಲಿಬೇಡಿರಿ. ತಲೆಯಲ್ಲಿ ಸೂಡಿದ ಗಂಧ ನಲಿನಲಿದು ಮೂಸಿದರೆ ಬೆಚ್ಚಿಲ್ಲದ ಬೆಚ್ಚು ಅಚ್ಚೊತ್ತಿತ್ತಾಗಳೆ ಗುರುನಿರಂಜನ ಚನ್ನಬಸವಲಿಂಗಾ.