ತನುವಿನಂತೆ ತನು, ಮನದಂತೆ ಮನ, ಪ್ರಾಣದಂತೆ ಪ್ರಾಣ,
ಭಾವದಂತೆ ಭಾವ, ನಡೆಯಂತೆ ನಡೆ, ನುಡಿಯಂತೆ ನುಡಿ,
ಹೇಗೆ ಇರ್ದಂತೆ ಹಾಗೆ ಇರ್ದು
ನಾವು ಆದಿಯಿಂದೆ ಅನಾದಿಯ ಕಂಡೆವು.
ಅನುಪಮ ಗತಿಮತಿಗಳೆಂಬ ನುಡಿ ನಿಮ್ಮನು ತೊರೆಯದಿಹವೆ?
ಕಿಚ್ಚಿನೊಳಗಿಕ್ಕದಿಹವೆ? ಪಿಶಾಚಿಯ ಮಾಡದಿಹವೆ?
ಭ್ರಮಣಗೊಳಿಸದಿಹವೆ? ದುರ್ಗತಿಗಿಕ್ಕದಿಹವೆ?
ನಾಲಿಗೆಯ ಸೀಳದಿಹವೆ?
ನುಡಿದಂತೆ ಹಿಡಿದು ನಡೆವರೆ ಶರಣರೆಂಬೆ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Tanuvinante tanu, manadante mana, prāṇadante prāṇa,
bhāvadante bhāva, naḍeyante naḍe, nuḍiyante nuḍi,
hēge irdante hāge irdu
nāvu ādiyinde anādiya kaṇḍevu.
Anupama gatimatigaḷemba nuḍi nim'manu toreyadihave?
Kiccinoḷagikkadihave? Piśāciya māḍadihave?
Bhramaṇagoḷisadihave? Durgatigikkadihave?
Nāligeya sīḷadihave?
Nuḍidante hiḍidu naḍevare śaraṇarembe kāṇā
guruniran̄jana cannabasavaliṅgā.
ಸ್ಥಲ -
ಮಹೇಶ್ವರಸ್ಥಲದ
ಉಳಿದ ವಚನಗಳು