ಹೊಡೆಗೆಡದಧೋಗತಿಗೊಂಡು
ಅನೃತವಸರಕ್ಕಾಯತವಾದ
ವೃಷೀಕಂಗಳ ಸ್ವಾಯತವಾಗಿ,
ನಿಜನಿಯತ ಚರಿತೆಯ ಸಾರಾಯವ ನೋಡಲಗಣಿತ ಕಾಣಾ,
ಮಾಡಲಮ್ಮೆ ನೋಡಾ.
ಹಿಡಿತಿಗೆ ಬಿಡಿತ ಮುಂದುಗೊಂಡಿಪ್ಪುದು,
ಬಿಡಿತಿಗೆ ಬಂಧನ ಮುಂದುಗೊಂಡಿಪ್ಪುದು,
ಬಂಧನಕ್ಕೆ ಭವರಾಟಣ ನಿಜವಾಗಿಪ್ಪುದು,
ಗುರುನಿರಂಜನ ಚನ್ನಬಸವಲಿಂಗಾ
ನೀವು ಸಾಕ್ಷಿಯಾಗಿಪ್ಪಿರಿ.
Art
Manuscript
Music
Courtesy:
Transliteration
Hoḍegeḍadadhōgatigoṇḍu
anr̥tavasarakkāyatavāda
vr̥ṣīkaṅgaḷa svāyatavāgi,
nijaniyata cariteya sārāyava nōḍalagaṇita kāṇā,
māḍalam'me nōḍā.
Hiḍitige biḍita mundugoṇḍippudu,
biḍitige bandhana mundugoṇḍippudu,
bandhanakke bhavarāṭaṇa nijavāgippudu,
guruniran̄jana cannabasavaliṅgā
nīvu sākṣiyāgippiri.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು