Index   ವಚನ - 1035    Search  
 
ಪೈರವಿಲ್ಲದ ಭೂಮಿಯ ಕಂಡು ಕೌಲವಿಡಿದನೊಬ್ಬ ಹಲಾಯುಧನು. ಮೂರುತಾಳಿನ ಕೂರಿಗೆಯ ಹೂಡಿ ಬಿತ್ತಲು ಫಲವಂದಂಕುರಿಸಿ ಫಲವಾಗಲು, ನೋಡಿ ಆಡಿ ಪರಿಣಾಮಿಸಿದ ಲೀಲೆಯ ಕುರುಹಿಂಗೆ ಮತ್ತೆ ಕುರುಹು ಕಾಣಬಾರದು. ಸುತ್ತಿದ ಸುಯಿಧಾನದ ಲತೆ ತೋರದು ಸುಪ್ರಭಾಮಯ ಗುರುನಿರಂಜನ ಚನ್ನಬಸವಲಿಂಗ ತಾನೆ ಆದಿ ಅನಾದಿ.