Index   ವಚನ - 1042    Search  
 
ಅರೆಮರುಳಿನಿಂದಾದ ಕುರುಹಿಂಗೆ ನೆರೆಮರುಳಾಗಿ ನರಳಿತ್ತು ಮೂರುಲೋಕವೆಲ್ಲ. ಸಿರಿವಲ್ಲಭ ಶಿರಹೀನ ಕರಶೂಲರಾದಿ ಸರ್ವರು ಕರ್ಮಕ್ಕೊಳಗಾದರು. ಪರಿಪರಿಯ ಪರಿಗಳನರಿಯದೆ ಹಿರಿದೆಂದರಿದಲ್ಲಿ ಪರಮ ಗುರುನಿರಂಜನ ಚನ್ನಬಸವಲಿಂಗವ ನೆರೆದುನೆರೆಯದಂತಿರ್ದ ಶರಣ.