Index   ವಚನ - 1050    Search  
 
ನುಡಿಯಲಮ್ಮೆನಯ್ಯಾ ಹುಸಿಗಲತ ಕುಶಲಗಳ ಗುರುಪ್ರಸಾದವಾವರಿಸಿದ ಜಿಹ್ವೆಯಾದ ಕಾರಣ. ನುಡಿಯಲಮ್ಮೆನಯ್ಯಾ ದ್ವೈತಾದ್ವೈತ ಸಂವಾದ ಸರವನು ಸಮರಸಾನುಭಾವವಾವರಿಸಿದ ಜಿಹ್ವೆಯಾದ ಕಾರಣ. ನುಡಿಯಲಮ್ಮೆನಯ್ಯಾ ನಾನು ನೀನೆಂಬ ನಾಣನುಡಿಯನು ಗುರುನಿರಂಜನ ಚನ್ನಬಸವಲಿಂಗವೇ ತಾನೆಂಬ ನುಡಿಯ ನುಂಗಿ ನಿಂದ ನಿರಾವಲಂಬ ಜಿಹ್ವೆಯಾದ ಕಾರಣ.