ಮಣ್ಣುಕೋಟೆಯೊಳಗೆ ಕಲ್ಲಮಂದಿರದಿ
ಮೂರ್ತಿಯನಿರಿಸಿ ನಡೆವ ಬದ್ಧಹಿರಿಯರ
ಸದ್ದು ಸಮಯದ ಸಾರಾಯಕ್ಕತೀತ
ಮತ್ತೆ ದ್ವಂದ್ವದನುಗುಣಾಗಮ್ಯ ಶಿವಾನುಭಾವಿ
ಸಾಕಾರ ಸನುಮತ ನಿರಾಕಾರ ನಿಜಾನಂದ
ಕಾರ್ಯಕಾರಣ ನಿರಂಜನನಿಧಿ
ಗುರುನಿರಂಜನ ಚೆನ್ನಬಸವಲಿಂಗಾ ನಿಮ್ಮ ಶರಣ.
Art
Manuscript
Music
Courtesy:
Transliteration
Maṇṇukōṭeyoḷage kallamandiradi
mūrtiyanirisi naḍeva bad'dhahiriyara
saddu samayada sārāyakkatīta
matte dvandvadanuguṇāgamya śivānubhāvi
sākāra sanumata nirākāra nijānanda
kāryakāraṇa niran̄jananidhi
guruniran̄jana cennabasavaliṅgā nim'ma śaraṇa.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು