ತಾಯಿ ಮಗಳ ಸಂಗವ ಮಾಡಿ
ತಂದೆಗೆ ಹುಟ್ಟಿದ ಮಗನ ಕೈಯೊಳೆತ್ತಿ
ಊರಬಿಟ್ಟು ಕಡೆಗೆ ಬರುವಲ್ಲಿ, ಕಾಡಬಂದವರಾರು
ಕೂಡಬಂದರು ನೋಡಾ.
ಕೆಡಿಸಬಂದವರಾರು ನುಡಿಸಬಂದರು ಕಾಣಾ.
ಸುಖಿಸಬಂದವರಾರು ಸುಳಿದುನಿಂದರು ಕೇಳಾ.
ಗೋಮಕ್ಕಳೆಲ್ಲರು ಗುಲಾಮರಾದಲ್ಲಿ ಗಸಣಿಯಡಗಿತ್ತು.
ಗುರುನಿರಂಜನ ಚನ್ನಬಸವಲಿಂಗಕ್ಕೆ ಸೆರಗ ಹಾಸಿದರೆ
ಮರಳಿ ಹೇಳದ ಸುಖವೆನಗೆ ಸ್ವಯವಾಯಿತ್ತು.
Art
Manuscript
Music
Courtesy:
Transliteration
Tāyi magaḷa saṅgava māḍi
tandege huṭṭida magana kaiyoḷetti
ūrabiṭṭu kaḍege baruvalli, kāḍabandavarāru
kūḍabandaru nōḍā.
Keḍisabandavarāru nuḍisabandaru kāṇā.
Sukhisabandavarāru suḷidunindaru kēḷā.
Gōmakkaḷellaru gulāmarādalli gasaṇiyaḍagittu.
Guruniran̄jana cannabasavaliṅgakke seraga hāsidare
maraḷi hēḷada sukhavenage svayavāyittu.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು