ವರ್ಷಾಕಾಲದಿ ಭೂಮಿ ಬೆದೆಗೊಂಡಲ್ಲಿ ಬಿತ್ತುವರು.
ಅಂಕುರಿಸಿ ಬಂದಲ್ಲಿ ಪರ್ಣವಾಗುವ ವಿಚಾರ ಮುಂದುಗೊಂಡಿಪ್ಪುದು.
ಪರ್ಣಗಂಡ ಮತ್ತೆ, ಹೊಡೆ ಕುಸುಮ ದೃಷ್ಟದಾಗಿಂಗೆ
ವಿಚಾರ ಮುಂದುಗೊಂಡಿಪ್ಪುದು, ಹೊಡೆಕುಸುಮಗಂಡ ಮತ್ತೆ
ಮೊದಲೆಂಬ ವಿಚಾರ ಮುಂದುಗೊಂಡಿಪ್ಪುದು.
ಮೊದಲಗಂಡ ಮತ್ತೆ ಏನುವನರಿಯದೆ ತಾನಾಗಿರ್ದ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಂತೆ.