ಅಯ್ಯಾ, ಸೊಸೆಯೆಂದರಿಯಬಾರದು, ಮಗಳೆಂದರಿಯಬಾರದು,
ಹಂಡೆತಿಯೆಂದರಿಯಬಾರದು, ತಾಯಿಯೆಂದರಿಯಬಾರದು ಇದೇನು ಹೇಳಾ?
ಅಳಿಯನೆಂದರಿಯಬಾರದು, ಮಗನೆಂದರಿಯಬಾರದು,
ಮಾವನೆಂದರಿಯಬಾರದು,
ತಂದೆಯೆಂದರಿಯಬಾರದು ಇದೇನು ಹೇಳಾ?
ಹಾಳೂರ ಸುಟ್ಟು ಬಾಳುವೆಯ
ಮಾಡಿ ಕುಲಗೆಟ್ಟು ಕೋಳುವೋದರು.
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮಂತೆ ನಿಮ್ಮಂಗದ ಮಹಿಮೆ.
Art
Manuscript
Music
Courtesy:
Transliteration
Ayyā, soseyendariyabāradu, magaḷendariyabāradu,
haṇḍetiyendariyabāradu, tāyiyendariyabāradu idēnu hēḷā?
Aḷiyanendariyabāradu, maganendariyabāradu,
māvanendariyabāradu,
tandeyendariyabāradu idēnu hēḷā?
Hāḷūra suṭṭu bāḷuveya
māḍi kulageṭṭu kōḷuvōdaru.
Guruniran̄jana cannabasavaliṅgā,
nim'mante nim'maṅgada mahime.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು