Index   ವಚನ - 1144    Search  
 
ಕುಸುಮವ ವಾಸಿಸಿ ಕಂಡು ಕಾಣದಂತೆ, ರುಚಿಯನರಿದು ಕಂಡು ಕಾಣದಂತೆ, ರೂಪವನರಿದು ಕಂಡು ಕಾಣದಂತೆ, ಸ್ಪರ್ಶವನರಿದು ಕಂಡು ಕಾಣದಂತೆ, ಶಬ್ದವನರಿದು ಕೇಳಿ ಕೇಳದಂತೆ ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ನಿಮ್ಮನರಿದು ಕಂಡುಕಾಣದಂತೆ ನಿಮ್ಮೊಳಗೆ ನೋಡಾ.