ಲಿಂಗದಿಂದುದಯ ನಮಗೆ,
ಹೇಗಿರ್ದಡು ಲಿಂಗದಿಂದ ಬೆಳಿಗೆ ಎಂದು
ಹೆಡಕೆತ್ತಿ ಆಚರಿಸಲಾಗದು.
ಸತ್ತು ಹುಟ್ಟಿ ಬೆಳೆದು ಬೆಳೆಯೊಳು
ಸುಯಿಧಾನಿ ಸುಖನರಿದು ಮರೆದು.
ಮಡಿಯಬಲ್ಲ ಮಹಿಮಂಗಲ್ಲದಿಲ್ಲವೈಕ್ಯಪದ
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Liṅgadindudaya namage,
hēgirdaḍu liṅgadinda beḷige endu
heḍaketti ācarisalāgadu.
Sattu huṭṭi beḷedu beḷeyoḷu
suyidhāni sukhanaridu maredu.
Maḍiyaballa mahimaṅgalladillavaikyapada
guruniran̄jana cannabasavaliṅgadalli.
ಸ್ಥಲ -
ಐಕ್ಯಸ್ಥಲದ ಉಳಿದ ವಚನಗಳು