Index   ವಚನ - 1156    Search  
 
ಆಯತವಾದಲ್ಲಿ ಅರಿಯಲುಂಟೆ? ಸ್ವಾಯತವಾದಲ್ಲಿ ಸಂಶಯವುಂಟೆ? ಸನ್ನಿಹಿತವಾದಲ್ಲಿ ನೆರೆಯಲುಂಟೆ? ಸತ್ತವರ ಹೆಸರಹೊತ್ತು ನಡೆದು ಹೋದರೆ ಕತ್ತೆ ನಾಯಿಜನ್ಮ ಕಡೆಗಾಣಬಾರದು. ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಕನು.