Index   ವಚನ - 1157    Search  
 
ಲಿಂಗವನರಿವನ್ನಕ್ಕರ ಅಂಗ ಮುಂದುಗೊಂಡಿಪ್ಪುದು. ಜಂಗಮವನರಿವನ್ನಕ್ಕರ ಪ್ರಾಣ ಮುಂದುಗೊಂಡಿಪ್ಪುದು. ಪ್ರಸಾದವನರಿವನ್ನಕ್ಕರ ಆತ್ಮ ಮುಂದುಗೊಂಡಿಪ್ಪುದು. ಈ ತ್ರಿವಿಧವನೊಳಗಿಟ್ಟು ನೋಡಿದರೆ ಅಂಗ ಪ್ರಾಣಾತ್ಮಸಂಗ ಸಮರಸ ಗುರುನಿರಂಜನ ಚನ್ನಬಸವಲಿಂಗದಲ್ಲಿ.