ಮೂರುಲಕ್ಷದ ಮೇಲೆ ತೊಂಬತ್ತಾರುಸಾವಿರ ಶಿವತಿಂಥಿಣಿಯೆಲ್ಲ
ಶಿವಾನುಭಾವವ ಮಾಡುವನ್ನಕ್ಕರ,
ಕಲ್ಯಾಣದೊಳಗೆ ಕಾಣಬಾರದ ಕಾರ್ಯವ ಕಂಡು ಮಾಡಿದೆ,
ಕೇಳಬಾರದ ಮಾತುಮಥನಿಸಿದೆ,
ನೋಡಬಾರದ ನೋಟದೊಳಗೆ ನೋಡಿಯಾಡಿದೆ.
ಅನುಭಾವದಂಗವ ಮರೆದು ನಿಂದಲ್ಲಿ
ಗುರುನಿರಂಜನ ಚನ್ನಬಸವಲಿಂಗವೆಂಬ ನಾಮ
ನಿರ್ನಾಮವಾಯಿತ್ತು.
Art
Manuscript
Music
Courtesy:
Transliteration
Mūrulakṣada mēle tombattārusāvira śivatinthiṇiyella
śivānubhāvava māḍuvannakkara,
kalyāṇadoḷage kāṇabārada kāryava kaṇḍu māḍide,
kēḷabārada mātumathaniside,
nōḍabārada nōṭadoḷage nōḍiyāḍide.
Anubhāvadaṅgava maredu nindalli
guruniran̄jana cannabasavaliṅgavemba nāma
nirnāmavāyittu.
ಸ್ಥಲ -
ಐಕ್ಯಸ್ಥಲದ ಉಳಿದ ವಚನಗಳು