ಮೊದಲಜನ್ಮದಲ್ಲಿ ಶಿವಾಂಶಿಕ ಬಂದನು.
ಎರಡನೆಯ ಜನ್ಮದಲ್ಲಿ ಜ್ಞಾನಕಲಾತ್ಮನಾಗಿ ಬಂದನು.
ಮೂರನೆಯ ಜನ್ಮದಲ್ಲಿ ಶಿಷ್ಯನಾಗಿ ಬಂದನು.
ನಾಲ್ಕನೆಯ ಜನ್ಮದಲ್ಲಿ ಲಿಂಗಭಕ್ತನಾಗಿ ಬಂದನು.
ಐದನೆಯ ಜನ್ಮದಲ್ಲಿ ನಿಷ್ಠಾಮಹೇಶ್ವರನಾಗಿ ಬಂದನು.
ಆರನೆಯ ಜನ್ಮದಲ್ಲಿ ನಿಜಪ್ರಸಾದಿಯಾಗಿ ಬಂದನು.
ಏಳನೆಯ ಜನ್ಮದಲ್ಲಿ ಪ್ರಾಣಲಿಂಗಿಯಾಗಿ ಬಂದನು.
ಎಂಟನೆಯ ಜನ್ಮದಲ್ಲಿ ಶರಣನಾಗಿ ಬಂದನು.
ಒಂಬತ್ತನೆಯ ಜನ್ಮದಲ್ಲಿ ಐಕ್ಯನಾಗಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ನಿರಂತರ ಸುಖಪರಿಣಾಮಿಯಾಗಿ ನಿಂದನು.
Art
Manuscript
Music
Courtesy:
Transliteration
Modalajanmadalli śivānśika bandanu.
Eraḍaneya janmadalli jñānakalātmanāgi bandanu.
Mūraneya janmadalli śiṣyanāgi bandanu.
Nālkaneya janmadalli liṅgabhaktanāgi bandanu.
Aidaneya janmadalli niṣṭhāmahēśvaranāgi bandanu.
Āraneya janmadalli nijaprasādiyāgi bandanu.
Ēḷaneya janmadalli prāṇaliṅgiyāgi bandanu.
Eṇṭaneya janmadalli śaraṇanāgi bandanu.
Ombattaneya janmadalli aikyanāgi
guruniran̄jana cannabasavaliṅgadalli
nirantara sukhapariṇāmiyāgi nindanu.
ಸ್ಥಲ -
ಐಕ್ಯಸ್ಥಲದ ಉಳಿದ ವಚನಗಳು