ಸಮ್ಮುಖ ಸಾಕಾರ ಹುಸಿಯೆಂಬುದ ತನುವಿಡಿದು ಕಂಡು,
ತನು ಹುಸಿಯೆಂಬುದ ಮನದಲ್ಲಿ ಕಂಡು,
ಮನ ಹುಸಿಯೆಂಬುದ ವಿವೇಕವಿಡಿದುಕಂಡು,
ವಿವೇಕದ ಮುಂದೆ ಅವಿವೇಕವೆಂಬುದ ಆತ್ಮಜ್ಞಾನದಿಂದ ಕಂಡು,
ಆತ್ಮ ಪರಮಾತ್ಮವೆಂಬ ಉಭಯ ಭಾವ ಭ್ರಾಂತಿಯೆಂದು ಕಂಡು,
ಕಂಡ ಮಂಡಲ ಕಾರಣಮೂರ್ತಿ ತಾನೆಂದು ಮರೆದಿರುವ ಮಹಾಂತ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Sam'mukha sākāra husiyembuda tanuviḍidu kaṇḍu,
tanu husiyembuda manadalli kaṇḍu,
mana husiyembuda vivēkaviḍidukaṇḍu,
vivēkada munde avivēkavembuda ātmajñānadinda kaṇḍu,
ātma paramātmavemba ubhaya bhāva bhrāntiyendu kaṇḍu,
kaṇḍa maṇḍala kāraṇamūrti tānendu marediruva mahānta kāṇā
guruniran̄jana cannabasavaliṅgā.