Index   ವಚನ - 1204    Search  
 
ಅರ್ಪಿತತ್ರಯದನುವರಿಯದಂಗ ಕಡೆಗಾಣದ ಭಂಗ. ಮುಂದೆ ಕಾಂಬುವುದು ಬಹುತೆರದಂಗ ನೋಡಾ. ಈ ಸೋಂಕಾಂಕನ ಮಾಟ ಸುಲಲಿತ ಕಾರ್ಯಕ್ಕೆ ಸಲ್ಲದು. ಮಾಯಾನುಕೂಲಿ ಪ್ರೇಮಭಾವಕ್ಕೆ ಬಾಧೆಯನುಳಿದು ಬೋಧಾಂಗವಿಲ್ಲ. ಆ ಅಂಗವನೊಲ್ಲದಿರ್ದನು ಚಿದಂಗಸುಖಮುಖಿಯಾಗಿ ನಮ್ಮ ಶುದ್ಧಸಿದ್ಧಪ್ರಸಿದ್ಧಪ್ರಭುಲಿಂಗವು.