ಅತ್ತಲರಿವರು ಸುತ್ತ ಮೋಹಿಗಳು ;
ಅತ್ತಲನುಪಮದನುವನವರರಿವರೆ?
ಇತ್ತಲರಿವರು ವಿಷಮವಿರಹಿತ ವಿಮಲಾಂಗ ಸಂಗಸುಖಿಗಳ;
ಇತ್ತಲನುಭೇದ ವಿಸರ್ಜನವನಿವರರಿವರೆ?
ಇದು ಕಾರಣ, ಅತ್ತಿಲ್ಲದಿರ್ದನಿತ್ತಲನುದಿನ ಚಲುವಾಂಗ
ಪ್ರಾಣಾತ್ಮಪ್ರಿಯ ಸಿದ್ಧಲಿಂಗ ನೋಡಾ ಅರಿವರು ಭಾವಿಸಿ.
Art
Manuscript
Music
Courtesy:
Transliteration
Attalarivaru sutta mōhigaḷu;
attalanupamadanuvanavararivare?
Ittalarivaru viṣamavirahita vimalāṅga saṅgasukhigaḷa;
ittalanubhēda visarjanavanivararivare?
Idu kāraṇa, attilladirdanittalanudina caluvāṅga
prāṇātmapriya sid'dhaliṅga nōḍā arivaru bhāvisi.
ಸ್ಥಲ -
ಶಿವಾಂಗಸ್ಥಲದ ವಚನಗಳು