Index   ವಚನ - 1210    Search  
 
ಕರ್ಮೇದ್ರಿಯ ಪಂಚಕಂಗಳಳಿದುಳಿದುದೇ ಸತ್ತು. ವಿಷಯಪಂಚಕಂಗಳಳಿದುಳಿದುದೇ ಚಿತ್ತು. ಧರ್ಮೇಂದ್ರಿಯ ಪಂಚಕಂಗಳಳಿದುಳಿದುದೇ ಆನಂದ. ವಾಯುಪಂಚಕಂಗಳಳಿದುಳಿದುದೇ ನಿತ್ಯ. ಕರಣಪಂಚಕಂಗಳಳಿದುಳಿದುದೇ ಪರಿಪೂರ್ಣ. ಇದು ಕಾರಣ ಈ ಪಂಚವಿಂಶತಿತತ್ವಂಗಳಳಿದುಳಿದಂಗವು ತಾನೇ ಅದು ಶಿವಾಂಗ ಚನ್ನ ಶುದ್ಧಸಿದ್ಧಪ್ರಸಿದ್ಧ ಪ್ರಭುವಿನಂಗ ಕಾಣಾ.