ಸತ್ಯಬೆಳಗ ಹೊತ್ತು ಸಮಯಸಂಪನ್ನತೆಯೊಳಗೆ ನಡೆವ
ಸಧರ್ಮಿಗಳ ಕಂಡು,
ಗಮನಾಗಮನವೆಂದು ನಡೆವಲ್ಲಿ ಬೆಳಗುಗತ್ತಲೆಯಪ್ಪಿ
ಸುಳುಹು ಸೂಕ್ಷ್ಮಗೆಟ್ಟು,
ಕಳೆ ಕಸವಗೂಡಿ ಕಷ್ಟಕಲ್ಪನೆಯೊಳಗೆ ಕಡೆಗಾಣದಾದರು.
ಮತ್ತೆ ಅವರಂಗಚರಿತೆಯನರಿಯದಿರ್ದನು
ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು
ನಿಜಮಾರ್ಗ ನಿಲುವಿನೊಳಗೆ.
Art
Manuscript
Music
Courtesy:
Transliteration
Satyabeḷaga hottu samayasampannateyoḷage naḍeva
sadharmigaḷa kaṇḍu,
gamanāgamanavendu naḍevalli beḷagugattaleyappi
suḷuhu sūkṣmageṭṭu,
kaḷe kasavagūḍi kaṣṭakalpaneyoḷage kaḍegāṇadādaru.
Matte avaraṅgacariteyanariyadirdanu
canna bindu nāda kaḷe prasannamūrti liṅgavu
nijamārga niluvinoḷage.
ಸ್ಥಲ -
ಭಕ್ತನ ಚರಾಂಗಸ್ಥಲದ
ವಚನಗಳು